ಬಿಲ್ಲನ್ನು ಸೃಜಿಸಿ ಕರಡನ್ನಾಗಿ ಉಳಿಸಿಕೊಳ್ಳಬಹುದು. ಕರಡುಗಳು ಬಿಲ್ ಸಂಖ್ಯೆಯ ಪ್ರತಿಯಾಗಿ ಸಂಗ್ರಹಗೊಂಡು ಖಜಾನೆಗೆ ಸಲ್ಲಿಸಲು ನಂತರ ಸಂಸ್ಕರಿಸಬಹುದು. ಡಿಡಿಓ ಕಚೇರಿಯು ಬಿಲ್ಲುಗಳನ್ನು ಸೃಜಿಸಿ, ನಂತರ ಸಂಸ್ಕರಿಸಿ ಸಲ್ಲಿಸಲು ಈ ಆಯ್ಕೆಯನ್ನು ಒದಗಿಸಲಾಗಿದೆ.
ಸಾಕಾಷ್ಟು ಅನುದಾನದ ಲಭ್ಯತೆವಿಲ್ಲದಿದ್ದಾಗ್ಯೂ ಬಿಲ್ಲನ್ನು ಸೃಜಿಸಿ ಕರಡು ಬಿಲ್ಲನ್ನಾಗಿ ಉಳಿಸಬಹುದು. ಆದರೆ ಬಿಲ್ಲುಗಳನ್ನು ಸಲ್ಲಿಸಲು ಬರುವುದಿಲ್ಲ.
ಹಂತ 1
ROLE: Caseworker
ಸಾಕಾಷ್ಟು ಅನುದಾನದ ಲಭ್ಯತೆವಿಲ್ಲದಿದ್ದಾಗ್ಯೂ ಬಿಲ್ಲನ್ನು ಸೃಜಿಸಿ ಕರಡು ಬಿಲ್ಲನ್ನಾಗಿ ಉಳಿಸಬಹುದು. ಆದರೆ ಬಿಲ್ಲುಗಳನ್ನು ಸಲ್ಲಿಸಲು ಬರುವುದಿಲ್ಲ.
ಹಂತ 1
ROLE: Caseworker
- ವಿಷಯ ನಿರ್ವಾಹಕರು ಖಜಾನೆ-2 ಸಿಸ್ಟಂಗೆ ಲಾಗಿನ್ ಆಗಬೇಕು.
- ಬಿಲ್ಲು ತಯಾರಿಕೆ & ಸಲ್ಲಿಸುವಿಕೆ ಪಥವನ್ನು ಕ್ಲಿಕ್ ಮಾಡಬೇಕು.
- ಬಿಲ್ಲು ವಲಯವನ್ನು ಆಯ್ಕೆಮಾಡಬೇಕು (ರಾಜ್ಯ/ಜಿಪಂ/ತಾಪಂ)
- ಸಮರ್ಪಕವಾದ ಬಿಲ್ಲು ವಿಧ ಹಾಗೂ ಕ್ಲೈಂ ವಿಧವನ್ನು ಆಯ್ಕೆಮಾಡಬೇಕು
- “ಓಪನ್”(Open) ಬಟನ್ ನ್ನು ಕ್ಲಿಕ್ ಮಾಡಬೇಕು.
- ಆಫ್ ಲೈನ್ ಮಂಜೂರಾತಿ ಆದೇಶವನ್ನು ಆಯ್ಕೆಮಾಡಬೇಕು.
- ಮಂಜೂರಾತಿ ಆದೇಶದ ವಿವರಗಳನ್ನು ದಾಖಲಿಸಬೇಕು ( ಮಂಜೂರಾತಿ ಆದೇಶ ಸಂಖ್ಯೆ, ಮಂಜೂರಾತಿ ಆದೇಶ ದಿನಾಂಕ)
- “ಓಪನ್”(Open) ಬಟನ್ ನ್ನು ಕ್ಲಿಕ್ ಮಾಡಬೇಕು.
- ನಾಲ್ಕು ಟ್ಯಾಬ್ ಗಳ ಹೊಸ ಪುಟವು ತೆರೆಯುತ್ತದೆ.
- ಬಿಲ್ಲು & ಕ್ಲೈಂ ವಿಧದ ಪ್ರಕಾರ ವಿಷಯ ನಿರ್ವಾಹಕರು ಸಾಮಾನ್ಯ ವಿವರಗಳು ಟ್ಯಾಬ್ ನಲ್ಲಿ ಸಮರ್ಪಕವಾದ ಲೆಕ್ಕ ಶೀರ್ಷಿಕೆಯನ್ನು ಆಯ್ಕೆಮಾಡಬೇಕು.
- ಈ ಕೆಳಕಂಡಂತೆ ಬಜೆಟ್ ವಿವರಗಳು ಸ್ವಯಂ ಪ್ರಚೋದಿಸಲ್ಪಡುತ್ತದೆ.
- ಆಬ್ಜೆಕ್ಟ್ ಶೀರ್ಷಿಕೆ ವಿವರಣೆ
- ಅನುದಾನ
- ಕೈಯಲ್ಲಿರುವ ಬಿಲ್ಲುಗಳ ಮೊತ್ತ
- ವೆಚ್ಚ (ಖಜಾನೆಗೆ ಸಲ್ಲಿಸಿರುವ ಬಿಲ್ಲುಗಳು)
- ಲಭ್ಯವಿರುವ ಶಿಲ್ಕು
- ಬಿಲ್ಲು ವಿವರಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು, ನಂತರ ಉಪ ವೋಚರ್ ಸಂಖ್ಯೆ, ಉಪ ವೋಚರ್ ದಿನಾಂಕ, ವೆಚ್ಚದ ವಿವರಣೆ, ಮೊತ್ತವನ್ನು ದಾಖಲಿಸಬೇಕು.
- “ಸ್ವೀಕರ್ತನ ವಿವರಗಳನ್ನು” ದಾಖಲಿಸಿ ಸೇರಿಸು(Add) ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಸ್ವೀಕರ್ತರು, ಕಡಿತಗಳು, ಹಾಗೂ ಮೊತ್ತದ ಸಾರಾಂಶದ ವಿವರಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
- ಪಾವತಿ ವಿಧವನ್ನು ಆಯ್ಕೆಮಾಡಬೇಕು (ಇ-ಪಾವತಿ/ಚೆಕ್ ಪಾವತಿ)
- ಒಂದು ವೇಳೆ ಅಲ್ಲಿ ಕಡಿತಗಳಿದ್ದಲ್ಲಿ ಅಥವಾ ಒಂದು ಲೆಕ್ಕ ಶೀರ್ಷಿಕೆಯಿಂದ ಇನ್ನೊಂದು ಲೆಕ್ಕ ಶೀರ್ಷಿಕೆಗೆ ವರ್ಗಾವಣೆ ಮಾಡುವುದಿದ್ದಲ್ಲಿ, ವಿಷಯ ನಿರ್ವಾಹಕರು ಟಿಟಿಆರ್/ಕಡಿತಗಳ ವಿವರಗಳನ್ನು ದಾಖಲಿಸಬೇಕು.
- ವಿಷಯ ನಿರ್ವಾಹಕರು ಉದ್ದೇಶವನ್ನು ಆಯ್ಕೆಮಾಡಬೇಕು (ಠೇವಣಿ ಟಿಟಿಆರ್, ವೃತ್ತಿ ತೆರಿಗೆ, ಮಾರಾಟ ತೆರಿಗೆ, ರಾಜಧನ ತೆರಿಗೆ ಹಾಗೂ ಆದಾಯ ತೆರಿಗೆ)
- ತೆರಿಗೆ ಕಡಿತಗಳನ್ನು ಆಯ್ಕೆಮಾಡಬೇಕು.
- ಕಡಿತಗಳನ್ನು ಯಾರ ಕ್ಲೈಂನಿಂದ ಮಾಡಬೇಕೊ ಅಂತಹ ಸ್ವೀಕರ್ತನ ಹೆಸರನ್ನು ಆಯ್ಕೆ ಮಾಡಬೇಕು.
- ನಂತರ “ಟಿಟಿಆರ್/ಕಡಿತಗಳನ್ನು ಸೇರಿಸು”(Add TTR Deduction) ಬಟನ್ ನ್ನು ಕ್ಲಿಕ್ ಮಾಡಬೇಕು.
- ಬಿಲ್ಲನ್ನು ಡ್ರಾಫ್ಟ್ ಆಗಿ ಉಳಿಸಲು “ಉಳಿಸು(Save)” ಬಟನ್ ನ್ನು ಕ್ಲಿಕ್ ಮಾಡಬೇಕು.
Path: Bill Preparation and Submission → Process → Create Bill.